ಪದ ಬಂಧ - ೨

ಶರತ್ ಮತ್ತು ಶುಭ ಅವರಿಗೆ ಧನ್ಯವಾದಗಳು. ಶರತ್ ಗೆ ಹೊಸ ಕಾರಿನ ಶುಭಾಶಯಗಳು. ನಿಮ್ಮ ಕಾಮೆಂಟ್ಸ್ ನೋಡಿ ಇನ್ನು ಸ್ವಲ್ಪ ನಿಮ್ ತಲೆ ತಿನ್ಬೇಕು ಅನ್ನಿಸ್ತಾ ಇದೆ. ಅದಕ್ಕಾಗಿ ಮತ್ತೆ ಹೊಸ ಪ್ರಶ್ನೆಗಳು. ಟ್ರೈ ಮಾಡಿ... ಕಾ ಕ್ತ ರಿ ನ ಅ ಸ್ಥಾ ಯು ಮೇ ಸಂ ಸಂ ಹು ರಿ ದ ನೆ ಡುಗ ಗೆ ಲಂ ಗಿ ಸಿ ಲಾ ರ ಕ ಕ ಸೊ ದ್ದೆ ಮು ರು ಗಿ ಪ್ಪು ರಾ ಸಾ (ಉತ್ತರಗಳನ್ನು ಕಾಮೆಂಟ್ ಬಾಕ್ಷ್ನಲ್ಲಿ ಬರೆಯಿರಿ )

ಅಕ್ಷರಗಳನ್ನು ಸರಿಯಾಗಿ ಜೋಡಿಸಿ !!

ನನಗಂತೂ ಮಾಡೋಕೆ ಕೆಲ್ಸ ಇಲ್ಲ ... ಅದಕ್ಕೆ ಈ ಪೋಸ್ಟು. ನೀವು ಫ್ರೀ ಇದ್ರೆ ಉತ್ತರಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಬರೀರಿ. ಹಾ ತ್ತಿ ಮು ನ ರ ತಾ ಗು ಮಿ ಕ ನು ನ ರೆ ಲ್ಪ ದ್ರ ಜ ರ್ಣ ಪೂ ಸ್ವಿ ತೇ ಚಂ ವಿ ಳು ಕ್ಕ ಚ ಹ ಮ ದೇ ನ ವ ಗ ಅ ಯಾ (ಸ್ವಲ್ಪ ಕಷ್ಟ ಇದೆ :) )

ಇಂದು ಎನಗೆ ಗೋವಿಂದ ನಿನ್ನಯ

" ಇಂದು ಎನಗೆ ಗೋವಿಂದ " - ಇದು ಶ್ರೀ ರಾಘವೇಂದ್ರ ಸ್ವಾಮಿಗಳು ಬರೆದ ಕೃತಿ. ಇದನ್ನು ಮೊದಲು 'ಮಂತ್ರಾಲಯ ಮಹಿಮೆ' ಅನ್ನೋ ಚಿತ್ರಕ್ಕೋಸ್ಕರ ಪಿ.ಬಿ. ಶ್ರೀನಿವಾಸ್ ರವರು ರಾಜಕುಮಾರ್ ಗಾಗಿ ಹಾಡಿದರು. ನಂತರ ಇದೆ ಹಾಡನ್ನು 'ಎರಡು ಕನಸು' ಚಿತ್ರಕ್ಕಾಗಿ ಎಸ್.ಜಾನಕಿ ಅವರು " ಭೈರವಿ " ರಾಗದಲ್ಲಿ ಅಧ್ಭುತವಾಗಿ ಹಾಡಿದ್ದಾರೆ. ತುಂಬ ದಿನದಿಂದ ಇದನ್ನು ನನ್ನ ಬ್ಲಾಗ್ನಲ್ಲಿ ಬರೀಬೇಕು ಅಂತ ಇದ್ದೆ. ಇಷ್ಟ ಆದ್ರೆ ಕಾಮೆಂಟ್ ಬರೆಯೋದನ್ನ ಮರೀಬೇಡಿ. ಬರೆದದ್ದಕ್ಕೂ ಸಾರ್ಥಕ ಆಗುತ್ತೆ. ಪಲ್ಲವಿ ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೋರೋ ಮುಕುಂದನೇ ಅನುಪಲ್ಲವಿ ಸುಂದರ ವದನನೆ ನಂದಗೋಪಿಯ ಕಂದ ಮಂದರೋಧಾರ ಆನಂದ ಇಂದಿರಾ ರಮಣ ಒಂದನೇ ಚರಣ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನು ಎಂದೆನ್ನ ಕುಂದುಗಳ ಎಣಿಸದೆ ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ ಎರಡನೇ ಚರಣ ಮುದತನದಿ ಬಹು ಹೇಡಿ ಜೀವ ನಾನಾಗಿ ಧೃಢ ಭಕುತಿಯನು ಮಾಡಲಿಲ್ಲವೋ ಹರಿಯೆ ನೋಡಲಿಲ್ಲವೋ ನಿನ್ನ ಪಾಡಲಿಲ್ಲವೊ ಮಹಿಮೆ ಕಾದಿಕಾರಾ(?) ಕೃಷ್ಣ ಬೇಡಿಕೊಂಬೇನೋ ನಿನ್ನ ಮೂರನೆ ಚರಣ ಧಾರುಣಿಯೊಳು ಭೂಭಾರ ಜೀವ ನಾನಾಗಿ ದಾರಿತಪ್ಪಿ ನಡೆದೇ ಸೇರಿದೆ ಕುಜನರ ಆರು ಕಾಯುವರಿಲ್ಲ ಸೇರಿದೆ ನಿನಗಯ್ಯಾ ಧೀರ ವೇಣುಗೋಪಾಲ ಪಾರುಗಾನಿಸೋ ಹರಿಯೆ ಪಲ್ಲವಿ (ಈ ಹಾಡನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ಉಡುಪಿಗೆ ಹೋದಾಗ ಹಾಡಿದರು ಎನ್ನಲಾಗಿದೆ. ಎರಡನೆಯ ಚರಣವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿಲ್ಲ. ನನಗೆ ಪಿ.ಬಿ.ಶ್ರೀನಿವಾಸ ಅವರು ಹಾಡಿರುವ ಹಾಡು ತುಂಬ ಇಷ್ಟವಾಯಿತು. ಎರಡೂ ಹಾಡುಗಳ ವೀಡಿಯೋ ಇಲ್ಲಿ ಹಾಕಿದ್ದೇನೆ )

ನಿನ್ನ ನೋಡಲೆಂತೋ - ಕನ್ನಡ version

(As requested by Shobha)


Ninna Nodalentho.m...
ನಿನ್ನ ನೋಡಲೆಂತೋ.. ಮಾತನದಲೆನ್ತೋ.. ಮನಸ ಕೇಳಲೆನ್ತೋ.. ಪ್ರೀತಿ ಹೇಳಲೆಂತೋ ಆಹಾ ಒಂಥರಾ ..ಥರ ಹೇಳಲೊಂಥರ ..ಥರ … ಕೆಲಲೊಂಥರಾ ..ಥರ – (2) ನಿನ್ನ ನೋಡಲೆನ್ತ್ಹೋ ಹೋ.. ಕಣ್ಣಿಗೇನು ಕಾಣದೆ, ಸ್ಪರ್ಶವೇನು ಇಲ್ಲದೆ ಏನು ನನ್ನ ಕಾಡಿದೇ.. ಏನು ಅರ್ಥವಾಗದೆ.. ಹಗಲು ರಾತ್ರಿ ನಿನ್ನದೇ.. ನೂರು ನೆನಪು ಮೂಡಿದೆ ನನ್ನಲೇನೋ ಆಗಿದೆ.. ಹೇಳಲೇನು ಆಗದೆ… ಮನಸು ಮಾಯವೆಂತೋ ಹೊಹೊಹೋ ಮಧುರ ಭಾವವೆಂತೋ ಪಯಣ ಎಲ್ಲಿಗೆಂತೋ.. ನಯನ ಸೇರಲೆಂತೋ… ಮಿಲನವಾಗಲೆನ್ತೋ.. ಗಗನ ಎಲ್ಲಿಎಂತೋ… ಆಹಾ ಒಂಥರಾ..ಥರ ಹೇಳಲೊಂಥರ.. ಥರ, ಕೇಳಲೊಂಥರಾ..ಥರ – (2) ಮೆಲ್ಲ ಮೆಲ್ಲ ಮೆಲ್ಲುವ… ಸನ್ನೆಯಲ್ಲಿ ಕೊಲ್ಲುವ ಸದ್ದೇ ಇರದ ಉತ್ಸವ, ಪ್ರೀತಿಯೊಂದೆ ಅಲ್ಲವ ಘಲ್ಲು ಘಲ್ಲು ಎನ್ನುವ, ಹೃದಯ ಗೆಜ್ಜೆ ನಾದವ ಪ್ರೀತಿ ತಂದ ರಾಗವ, ತಾಳಲೆನ್ತೋ ಭಾವವ ಹೃದಯದಲ್ಲಿ ಎಂತೋ, ಹೊಹೊಹೋ ಉದಯವಾಯಿತೆನ್ತೋ, ಸನಿಹವಾಗಲೆನ್ತೋ, ಕನಸ ಕಾಣಲೆನ್ತೋ ಹರುಷ ಏನೋ ಎಂತೋ, ಸೊಗಸ ಹೇಳಲೆಂತೋ, ಆಹಾ ಒಂಥರಾ.. ಥರ ಹೇಳಲೊಂಥರ.. ಥರ, ಕೇಳಲೊಂಥರಾ..ಥರ.. – (2)

( ನೋಟ್: ನನಗೆ ವ್ಯಾಕರಣ ದೋಷ ಕಂಡ್ರೆ ಸಿಕ್ಕಾಪಟ್ಟೆ ಕೋಪ ಕಣ್ರೀ. ಆದ್ರೆ ಎಷ್ಟು ಟ್ರೈ ಮಾಡಿದ್ರು ಸ್ವಲ್ಪ ತಪ್ಪು ನುಸುಳಿಬಿಟ್ಟಿದೆ. ನಿಮಗೆ irritate ಆದ್ರೆ ಹೇಳ್ರಿ. ಪೋಸ್ಟ್ ತೆಗೆಯೋನಂತೆ. )

ನಿನ್ನ ನೋಡಲೆಂತೋ ಮಾತನಾಡಲೆಂತೋ

ವೀಕೆಂಡ್ ಬರ್ತಾ ಇದೆ .. ಆರಾಮಾಗಿ ಹಾಡು ಹೇಳ್ತಾ ಮಜಾ ಮಾಡಿ ... ಮುಸ್ಸಂಜೆ ಮಾತು ಸಿನೆಮಾದಿಂದ ಸೋನು ಮತ್ತು ಶ್ರೇಯ ಹಾಡಿರುವ ನನ್ನ ಫೇವರಿಟ್ ಆದ ಹಾಡು ಕರೋಕೆ ಜೊತೆಗೆ ....
Ninna Nodalentho.m...
ninna noDalentO.. mAtanADalentO…
manasa kELalentO.. preeti hELalentO
aha ontharA..tharA
hELalontharA..tharA… kELalontharA..tharA – (2)

ninna nODalenthO

hO.. kaNNigEnu kANadE, sparshavEnU illade
enu nanna kadide.. enu arthavAgade..
hagalu ratri ninnadE.. nUru nenapu mUDide
nannalEnO Agide.. hELalEnu aagade…
manasu mAyaventO hohoho
madhura bhAvaventO
payaNa elligentO.. nayana sEralentO…
milanavAgalentO.. gagana ellientO…
AhA ontharA..tharA
hELalontharA..tharA, kELalontharA..tharA – (2)

mella mella melluva… sanneyalli kolluvA
sadde irada utsava, pritiyonde yellawa
ghallu ghallu yennuwa, hridaya gejje nAdava
priti tanda ragava, tALale.ntO bhAvavA
hrudayadalli entO, hohoho
udayavAyitentO,
sanihavAgalentO, kanasa kANalentO
harusha yeno enthO, sogasa hELale.ntO,
AhA ontharA.. tharA
hELalontharA..tharA, kELalontharA..tharA.. – (2)

ಇಷ್ಟ ಆಯ್ತಾ .. ಮತ್ತೆ ಒಂದು ಕಾಮೆಂಟ್ ಬರೀರಿ ... ಏನ್ ಯೋಚನೆ ಮಾಡ್ತಾ ಇದ್ದೀರಾ ??

ಏನೇನೋ ಆಸೆ

ಚಿತ್ರ : ಶಂಕರಗುರು

ಈಗ ನೀವು ಮ್ಯೂಸಿಕ್ ಜೊತೆಗೆ ಹಾಡಬಹುದು!!!! ಸಾಹಿತ್ಯ ಇದೆ, ಹಿನ್ನೆಲೆ ಸಂಗೀತ ಇದೆ.. innenu beku?

ಇಷ್ಟವಾದರೆ ಒಂದು ಕಾಮೆಂಟ್ ಬರೆಯಿರಿ. :)

Eneno Aase.MP3
ಏನೇನೋ ಆಸೆ ನೀ ತ೦ದಾ ಭಾಷೆ ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ - 2 ಲತೆಗಳು ಬಳುಕುತಿವೆ ನಿನ್ನ೦ತೇ ಆಡಿ ಸುಮಗಳು ನಗುತಲಿವೆ ನಿನ್ನನ್ನೂ ನೋಡಿ ಹಿಮದಗಿರಿಯ ಬಳಸಿ ಬರುವ ಗಾಳಿ ತರಲು ಛಳಿ ಇನಿಯ ಬಳಿಗೆ ಒಲಿದು ಬ೦ದು ಸನಿಹ ತರಲು ಬಿಸಿ ಏನೇನೋ ಆಸೆ ನೀ ತ೦ದಾ ಭಾಷೆ ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ ಕಾಮನ ಬಿಲ್ಲಿ೦ದಾ ಬ೦ದಿತು ನಿನ್ನ೦ದಾ ತಾರೆಯ ಹೊಳಪಿ೦ದಾ ಬ೦ದಿತು ಕಣ್ಣ೦ದಾ ಈ ಮಾತು ಬಿಡು ಬಿಡು ಮನಸ್ಸಿಲ್ಲಿ ಇಡು ಇಡು ಸ೦ತೋಷ ಕೊಡು ಕೊಡು ಬಾ ನಲ್ಲೇ ಏನೇನೋ ಆಸೆ ನೀ ತ೦ದಾ ಭಾಷೆ ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ

**************** ************

ಜೋಕೆ ನಾನು ಬಳ್ಳಿಯ ಮಿಂಚು

ಚಿತ್ರ : ಪರೋಪಕಾರಿ ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು ಬಲೆಗೆ ಬಿದ್ದಾಗಲೇ ಅರಿವೇ ಈ ಸಂಚು - ೨ ಸ್ವಲ್ಪ ಬಳಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ ತುಂಟು ನಗೆಯ ಬಾಣ ಮೆತ್ತಾಗಿ ನಿಂಗೆ ಜಾಣ ನೀನೆ ನನ್ನ ಬಂಡಿ ಆವಾಗ ಚಂದದ ಹೆಂಡತಿ ಜೇನು ಹೀರುವ ದುಂಬಿ ಆಗುವ ಆದ್ರೆ ನಂತರ ಮಾತು ಬಂದರೆ ನಿಧಾನ ನಿಧಾನ ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು ಬಲೆಗೆ ಬಿದ್ದಾಗಲೇ ಅರಿವೇ ಈ ಸಂಚು ಏನು ಹುಡುಕುವೆ ನೀನು ನನ್ನಂದ ನೋಡುವೆನೋ ನನಗಿಂತ ರತಿ ಬೇಕೇನೋ ಹೆಜ್ಜೆ ಇಡುವ ಮುನ್ನ ನೀ ನೋಡು ಒಮ್ಮೆ ನನ್ನ ಕನ್ಯ ತಿಳಿ ಓ ಚನ್ನ ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ...

********** ***********

ಯಾವ ಮೋಹನ ಮುರಳಿ ಕರೆಯಿತು

ಯಾವ ಮೋಹನ ಮುರಳಿ ಕರೆಯಿತುದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಿಂಚಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಒಳಗೆ ಕರಣ ಗಣದಿರಿಂಗಣ ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ ವಿವಶವಾಯಿತು ಪ್ರಾಣ ಹಾ ! ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು ಯಾವೆ ಬ್ರಿನ್ದವನವು ಚಾಚಿತು ತನ್ನ ಮಿಂಚಿನ ಕೈಯನು ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು.

ಅಮ್ಮ ನಾನು ದೇವರಾಣೆ

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನೆಲುವಲ್ಲಿ ಹೇಗೆ ತಾನೆ ತೆಗೆಯಲೆ ಅಮ್ಮ ನನ್ನ ಪುಟ್ಟ ಕೈಗಳಲಿ ಶಾಮ ಹೇಳಿದಾ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ ಬೆಣ್ಣೆ ಒರೆಸಿದ ಕೈಯ್ಯ ಬೆನ್ನ ಹಿಂದೆ ಒರೆಸುತ್ತ ಎತ್ತಿದ ಕೈಯ್ಯ ಕಡೆಗೊಲನ್ನು ಮೂಲೆಲಿಟ್ಟು ನಕ್ಕಳು ಗೋಪಿ ಸೂರದಾಸ ಪ್ರಿಯ ಶಾಮನ ಮುತ್ತಿಟ್ಟು ನಕ್ಕಳು ಗೋಪಿ

ಮಂಕುತಿಮ್ಮನ ಕಗ್ಗ ೧೯ ಮತ್ತು ೨೦

ಕಗ್ಗ : ೧೯
ಕಗ್ಗ : ೨೦
ಕಗ್ಗ : ೨೧ >>

ಮಂಕುತಿಮ್ಮನ ಕಗ್ಗ ೧೭ ಮತ್ತು ೧೮

ಕಗ್ಗ : ೧೭
ಕಗ್ಗ : ೧೮

ಮಂಕುತಿಮ್ಮನ ಕಗ್ಗ ೧೫ ಮತ್ತು ೧೬

ಕಗ್ಗ : ೧೫
ಕಗ್ಗ : ೧೬

ಮಂಕುತಿಮ್ಮನ ಕಗ್ಗ ೧೩ ಮತ್ತು ೧೪

ಕಗ್ಗ : ೧೩
ಕಗ್ಗ : ೧೪

ಮಂಕುತಿಮ್ಮನ ಕಗ್ಗ ೧೧ ಮತ್ತು ೧೨

ಕಗ್ಗ : ೧೧
ಕಗ್ಗ : ೧೨

ಮಂಕುತಿಮ್ಮನ ಕಗ್ಗ ೯ ಮತ್ತು ೧೦

ಕಗ್ಗ : ೯
ಕಗ್ಗ : ೧೦

ಮಂಕುತಿಮ್ಮನ ಕಗ್ಗ ೭ ಮತ್ತು ೮

ಕಗ್ಗ : ೭
ಕಗ್ಗ : ೮

ಮಂಕುತಿಮ್ಮನ ಕಗ್ಗ ೫ ಮತ್ತು ೬

ಕಗ್ಗ : ೫
ಕಗ್ಗ : ೬

ಮಂಕುತಿಮ್ಮನ ಕಗ್ಗ ೩ ಮತ್ತು ೪

ಕಗ್ಗ : ೩

ಕಗ್ಗ : ೪

ಮಂಕುತಿಮ್ಮನ ಕಗ್ಗ

ಕಗ್ಗ : ೧

ಕಗ್ಗ : ೨

ಕಗ್ಗ : ೩ >>

ಡಿ.ವಿ. ಗುಂಡಪ್ಪ

D.V. Gundapa (1889-1975, pen name DVG or deeveejee) was one of the most prominent writers, and poets of modern Kannada. His father's name was Devarahalli Venkataramanayya. Gundappa didn't have much formal education, but due to self-study and dedication, attained scholarship in English, Kannada, and Sanskrit languages. He translated "Eshopanishad" to Kannada.
DVG was a multi-talented writer. He started Kannada newspapers "Bharat" and "Karnataka". He founded the Gokhale Institute and promoted fine arts of India. He served as the president of the 18th Kannada Literary Conference held in Madikeri.
Important Works of D.V. Gundappa "Manku Thimmana Kagga", is a collection of songs imbibing folk wisdom and philosophy of India, "Umarana Osage" -- a translation of poems of Omar Khayyam,
"Soundarya mattu Sahitya" -- a critical work on literary aesthetics.

ಖುಷಿ

ಸದಾ ಖುಷಿಯಾಗಿರಲು
ಏನಿರಬೇಕು?
ಬಾಳಿನಲ್ಲಿ ದಿನವು ಹನಿ
ಮೂನಿರಬೇಕು
ನನ್ನ ತೋಳಿನಲ್ಲಿ ಪ್ರಿಯೆ
ನೀನಿರಬೇಕು
ಬೇಸಿಗೆಯಾದ್ದರಿಂದ ಫ್ಯಾನಿರಬೇಕು...!!!

ನಲ್ಲೆ

ನೆನ್ನೆ ಆಕೆ ಇಂದು ಈಕೆ
ನಾಳೆ
ಇನ್ನೊಬ್ಬ ನಲ್ಲೆ
ಹೆಣ್ಣೆಂದರೆ
ಹುಡುಗರಿಗೆ
ಟೀವಿ ಚಾ - ನಲ್ಲೆ ?? 

ಸುಸ್ತು

ನಡೆಯಲಿಲ್ಲ

ಓದಲಿಲ್ಲ

ಕಾರಲ್ಲಿ ಬಂದರೂ ಇಷ್ಟೊಂದು ಸುಸ್ತೆ ?

ಹೌದು ಮಾರಾಯ್ರೆ

ಹಾಗಿದೆ ನಮ್ಮ ರಸ್ತೆ

ಸುದ್ದಿ

ದಿನಪತ್ರಿಕೆಯಲ್ಲಿ ಬಂತೊಂದು ಸುದ್ದಿ

ಮಂಗಳೂರಿನಲ್ಲಿ ಮಲೇರಿಯ ಹಾವಳಿ

ಮರುದಿನ ಅದು ಬಂತು ತಿದ್ದಿ

ಅಲ್ಲ ಮಲೆಯಾಳಿ ಹಾವಳಿ ... !! 

ಬದಲಾವಣೆ

ಕಾಶಿ, ರಾಮೇಶ್ವರ

ಅನ್ನುತ್ತಿದ್ದ ತಾತ

ಶುರು ಮಾಡಿದ್ದಾನೆ ಈಗ

ಹೊಸ ವರಾತ..

ನೋಡಬೇಕು ಶಿಮ್ಲಾ,ಕಾಶ್ಮೀರ, ಆಗ್ರಾ

ಎಲ್ಲೋ ಸಿಕ್ಕಿರಬೇಕು ವಯಾಗ್ರ..!!

ಕಂಬಳಿ

ಹೇಗೆ ತಡೆಯಲಿ ಮೈ ನಡುಗುವ ಚಳಿ??

ಇಲ್ಲ ನನ್ನ ಬಳಿ ಹೊಡೆಯಲು ಕಂಬಳಿ..

ಆದ್ರಿಂದ ಪ್ರಿಯೆ ನೀನೆ

come ಬಳಿ ...!!!

ವರ

ಕೊಡು ದೇವರೆ ವರ

ಪೊಳ್ಳು ಭರವಸೆನೀಡದಂಥ

ಆಡದೇ ಮಾಡುವಂಥ ಸಚಿ-ವರ..!!!
********
 

ಗುಜರಿ

ಮುದುಕಿ: ರೀ, ನಮ್ಮನೆ ಎದುರಿಗೆ ಇರೋ

ಗುಜರಿ ಅಂಗಡಿಯ ಹುಡುಗ ನನ್ನ

ನೋಡಿ ದಿನಾ ನಗ್ತಾನೆ..

ಮುದುಕ: ಇರ್ಲಿ ಬಿಡೇ.. ಅವನಿಗೆ ಯಾವಾಗಲು

ಹಳೆ ಸಾಮಾನ್ ಮೇಲೇನೆ ಕಣ್ಣು...!!!

ಈ ಪ್ರೀತಿ ಅಂದ್ರೆ ಹೀಗೆನಾ??

ಮೋಸ ಮಾಡಿ ಪ್ರೀತ್ಸು

ಆದ್ರೆ ಪ್ರೀತ್ಸಿ ಮೋಸ ಮಾಡಬೇಡ..

ಯೋಚಿಸಿ ಪ್ರೀತಿ ಮಾಡು

ಆದ್ರೆ ಪ್ರೀತಿಸಿ ಯೋಚಿಸಬೇಡ.

*******

ಹುಡುಗಿಯರ ಹಿಂದೆ ಯಾಕೆ ಬೀಳ್ತೀಯ ದಡ್ಡ

ಅವರಿಗಾಗಿ ಯಾಕೆ ವೇಸ್ಟ್ ಮಾಡ್ತೀಯ ದುಡ್ಡ

ಅವಳು ಸಿಗದಿದ್ದಾಗ ಬಿಡ್ತೀಯ ಮೀಸೆ ಗಡ್ಡ

ಅವಳು ಕೈ ಕೊಟ್ಟಾಗ ಹುದುಕ್ತೀಯ ಗುಡ್ಡ..!!

ಹುಡುಗೀರೆ ಹೀಗೆ

ನಾನು ಮೂರು ವರ್ಷದವನಾಗಿದ್ದಾಗ ಬೇಡ ಬೇಡ ಅಂದ್ರು ಹುಡುಗಿಯರು ಮುತ್ತು ಕೊಡ್ತಿದ್ರು ಈಗ ಇಪ್ಪತ್ತೊಂದು ವರ್ಷ ಬೇಕು ಬೇಕು ಅಂದ್ರು ಒಬ್ರೂ ಮುತ್ತು ಕೊಡಲ್ಲ... ನೀಯತ್ತಿಲ್ಲದ ಹುಡುಗೀರು.

ಡುಂಡಿ ರಾಜ್ ರವರ ಹನಿಗವನಗಳು

ತೊಂಬತ್ತು ವರ್ಷದವನೊಬ್ಬ

ಅಪ್ಪನಾದನಂತೆ

ವಿಚಿತ್ರ ! ಆದರೂ ನಿಜ.

ಮುದ್ದು ಮುದ್ದಾದ

ಗಂಡು ಮಗು

ಹೆಸರು ವಯಾಗ್ರಜ !!

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan