ಅಕ್ಷರಗಳನ್ನು ಸರಿಯಾಗಿ ಜೋಡಿಸಿ !!

ನನಗಂತೂ ಮಾಡೋಕೆ ಕೆಲ್ಸ ಇಲ್ಲ ... ಅದಕ್ಕೆ ಈ ಪೋಸ್ಟು. ನೀವು ಫ್ರೀ ಇದ್ರೆ ಉತ್ತರಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಬರೀರಿ. ಹಾ ತ್ತಿ ಮು ನ ರ ತಾ ಗು ಮಿ ಕ ನು ನ ರೆ ಲ್ಪ ದ್ರ ಜ ರ್ಣ ಪೂ ಸ್ವಿ ತೇ ಚಂ ವಿ ಳು ಕ್ಕ ಚ ಹ ಮ ದೇ ನ ವ ಗ ಅ ಯಾ (ಸ್ವಲ್ಪ ಕಷ್ಟ ಇದೆ :) )

ಇಂದು ಎನಗೆ ಗೋವಿಂದ ನಿನ್ನಯ

" ಇಂದು ಎನಗೆ ಗೋವಿಂದ " - ಇದು ಶ್ರೀ ರಾಘವೇಂದ್ರ ಸ್ವಾಮಿಗಳು ಬರೆದ ಕೃತಿ. ಇದನ್ನು ಮೊದಲು 'ಮಂತ್ರಾಲಯ ಮಹಿಮೆ' ಅನ್ನೋ ಚಿತ್ರಕ್ಕೋಸ್ಕರ ಪಿ.ಬಿ. ಶ್ರೀನಿವಾಸ್ ರವರು ರಾಜಕುಮಾರ್ ಗಾಗಿ ಹಾಡಿದರು. ನಂತರ ಇದೆ ಹಾಡನ್ನು 'ಎರಡು ಕನಸು' ಚಿತ್ರಕ್ಕಾಗಿ ಎಸ್.ಜಾನಕಿ ಅವರು " ಭೈರವಿ " ರಾಗದಲ್ಲಿ ಅಧ್ಭುತವಾಗಿ ಹಾಡಿದ್ದಾರೆ. ತುಂಬ ದಿನದಿಂದ ಇದನ್ನು ನನ್ನ ಬ್ಲಾಗ್ನಲ್ಲಿ ಬರೀಬೇಕು ಅಂತ ಇದ್ದೆ. ಇಷ್ಟ ಆದ್ರೆ ಕಾಮೆಂಟ್ ಬರೆಯೋದನ್ನ ಮರೀಬೇಡಿ. ಬರೆದದ್ದಕ್ಕೂ ಸಾರ್ಥಕ ಆಗುತ್ತೆ. ಪಲ್ಲವಿ ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೋರೋ ಮುಕುಂದನೇ ಅನುಪಲ್ಲವಿ ಸುಂದರ ವದನನೆ ನಂದಗೋಪಿಯ ಕಂದ ಮಂದರೋಧಾರ ಆನಂದ ಇಂದಿರಾ ರಮಣ ಒಂದನೇ ಚರಣ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನು ಎಂದೆನ್ನ ಕುಂದುಗಳ ಎಣಿಸದೆ ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ ಎರಡನೇ ಚರಣ ಮುದತನದಿ ಬಹು ಹೇಡಿ ಜೀವ ನಾನಾಗಿ ಧೃಢ ಭಕುತಿಯನು ಮಾಡಲಿಲ್ಲವೋ ಹರಿಯೆ ನೋಡಲಿಲ್ಲವೋ ನಿನ್ನ ಪಾಡಲಿಲ್ಲವೊ ಮಹಿಮೆ ಕಾದಿಕಾರಾ(?) ಕೃಷ್ಣ ಬೇಡಿಕೊಂಬೇನೋ ನಿನ್ನ ಮೂರನೆ ಚರಣ ಧಾರುಣಿಯೊಳು ಭೂಭಾರ ಜೀವ ನಾನಾಗಿ ದಾರಿತಪ್ಪಿ ನಡೆದೇ ಸೇರಿದೆ ಕುಜನರ ಆರು ಕಾಯುವರಿಲ್ಲ ಸೇರಿದೆ ನಿನಗಯ್ಯಾ ಧೀರ ವೇಣುಗೋಪಾಲ ಪಾರುಗಾನಿಸೋ ಹರಿಯೆ ಪಲ್ಲವಿ (ಈ ಹಾಡನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ಉಡುಪಿಗೆ ಹೋದಾಗ ಹಾಡಿದರು ಎನ್ನಲಾಗಿದೆ. ಎರಡನೆಯ ಚರಣವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿಲ್ಲ. ನನಗೆ ಪಿ.ಬಿ.ಶ್ರೀನಿವಾಸ ಅವರು ಹಾಡಿರುವ ಹಾಡು ತುಂಬ ಇಷ್ಟವಾಯಿತು. ಎರಡೂ ಹಾಡುಗಳ ವೀಡಿಯೋ ಇಲ್ಲಿ ಹಾಕಿದ್ದೇನೆ )

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan