ಝೆನ್ ಕಥೆ

ಒಬ್ಬ ಗುರುವಿನ ಬಳಿಯಲ್ಲಿ ಶಿಷ್ಯನೊಬ್ಬ ಕೇಳುತ್ತಾನೆ,
"ನನಗೆ ಝೆನ್ ಎಂದರೇನೆಂದೇ ಅರ್ಥವಾಗುತ್ತಿಲ್ಲ."
"ಅರ್ಥವಾಗುವಂಥದ್ದಲ್ಲ , ಅದು!"
"ಅರ್ಥ ಮಾಡಿಸುವಿರಾ?"
"ಈ ಜಗತ್ತಿನಲ್ಲಿ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
ನಿನ್ನ ತಾಯಿಯ ಪ್ರೀತಿ ನಿನಗೆ ಅರ್ಥವಾಗಿದೆಯೆ?"
    ಶಿಷ್ಯ ಸುಮ್ಮನಾಗುತ್ತಾನೆ.

Janagala sulige

ಜನಗಳ ಸುಲಿಗೆ ಮಾಡುವ
ಈ ಕರೆಂಟು ಇಲ್ಲದೇ ಇದ್ದಿದ್ದರೆ
ಒಬ್ಬೊಬ್ಬನಿಗೂ ಒಂದೊಂದು
ಪಂಜು ಹುಡುಕುವ ತಾಕತ್ತು ಬರುತ್ತಿತ್ತು
ಯಾವುದೇ ಬೀಜದ ಎಣ್ಣೆ ಸುರಿದು
ಹೊತ್ತಿಸಿಕೊಂಡು ಓಡಾಡಬಹುದಿತ್ತು
ಕರೆಂಟು ಕೈಲಿ ಹಿಡಿದವರೆಲ್ಲ
ಕೊನೆ ಕಂಡರು
ಪಂಜು ಹಿಡಿದವರೆಲ್ಲ
ಮನೆ ಮುಟ್ಟಿದರು.

      -- ಸಿ.ವಿ.ಶೇಷಾದ್ರಿ ಹೊಳವನಹಳ್ಳಿ

K. S. Narasimha Swami Poems

      ಅವಳ ಬಣ್ಣ ಕೊಂಚ ಕಪ್ಪು
ಆದರೇನು ನನಗೆ ಒಪ್ಪು
      ಕಪ್ಪು ಬಣ್ಣವಾದರೇನು
ಮೈಯು ಪ್ರೇಮ ಕರಿಯದೆ?
      ಒಪ್ಪೆ ಮನವು ಕಪ್ಪು ಮೀರಿ
ಒಲವು ಹರಿಯದೆ?
      ಎನ್ನ ರನ್ನೆ... ಕಣ್ಣ ಮುಂದೆ
ಮಿಂಚಿ ಮೆರೆದು ಸೆಳೆದಳೆನ್ನನು...

*******

ಹನಿಗವನಗಳು

ದೋಣಿ
ಮುಳುಗುವ ದೋಣಿ ಎಂಬ
ಖಚಿತ ಧಾವಂತದಲ್ಲಿ
ಬಂಧುಗಳೆಲ್ಲಾ ಹೊರ ಜಿಗಿದಾಗ,
ಭಾರ ಕಡಿಮೆಯಾಗಿ
ದೋಣಿ ಮುಳುಗಲೇ ಇಲ್ಲ.
          -- ಡಾ| ಶಾಂತಲಕ್ಷ್ಮಿ

ಪರಿಮಳದ ಮನೆ

ಕಲ್ಲೊಂದು ಪೊದೆಗೆ ಬಿದ್ದಾಗ
ಹಕ್ಕಿ ರಿವ್ವನೆ ಹಾರಿತು
ಮೊಲ ಛಂಗನೆ ನೆಗೆಯಿತು
ಹಾವು ಹೆಡೆಯೆತ್ತಿ ಸರಿಯಿತು
ಕಲ್ಲು ಹೃದಯದಿಂದ
ಭಯದ ಅಲೆಗಳು.

ಹೂವೊಂದು ಗಿಡದಲ್ಲಿ ಅರಳಿದಾಗ
ದುಂಬಿ ಹಾರಿ ಬಂತು
ಚಿಟ್ಟೆ ತೇಲಿ ಬಂತು
ಹುಡುಗಿ ಓಡಿ ಬಂದಳು
ಹೂವಿನ ಒಡಲಿಂದ
ಖುಷಿಯ ತರಂಗಗಳು.

ಕಲ್ಲಿಗೆ ಕಮಟು ವಾಸನೆ
ಹೂವು ಪರಿಮಳದ ಮನೆ.

-- ರವಿಶಂಕರ oddambettu

ಚಂದ್ರನ ಕುರಿತಾದ ಹನಿಗವನಗಳು - ಭಾಗ ೧

ಚಂದ್ರ ಚುಟುಕು 

ಇಂದುಮುಖಿಯರೆಲ್ಲಾ
ಖುಷಿಪಟ್ಟ
ಆ ಕ್ಷಣ
ಚಂದ್ರ ಗ್ರಹಣ !

********
ತಾರೆಯರೇ ಹೀಗೆ
ಕಣ್ಣು ಹೊಡೆದ ಮಾತ್ರಕ್ಕೇ
ಚಂದ್ರ ಸಿಕ್ಕುವನೇ?
ಪಾಪ!
ಇರುವನು ಅವನೊಬ್ಬನೇ !!

************

ಎಂಥ
ಅಹಂಕಾರ
ಚಂದ್ರನಿಗೆ
ಹೀಗಾ
ಚೆಲ್ಲಾಡುವುದು
ನಗ ನತ್ತುಗಳ
ತುಂಬಿ ಹೋಗಿದೆಯಲ್ಲ
ಬಾನಂಗಳ  !!
 
         -- ಅರವಿಂದ ದೀಕ್ಷಿತ್
       
**********

ಮುಂದುವರೆಯುವುದು...

ಹನಿಗವನಗಳು

ಬಡವ
ಗೆಳತೀ,
ನಿನ್ನ ಚಕ್ಕೆ ಕಣ್ಣುಗಳ
ಕಂಡಾಗಲೆಲ್ಲ
ಅನಿಸಿದ್ದು,
ಆ ಆಕಾಶದರಸ
ಎಂಥಾ ಬಡವ !!!
   -- ಡಾ! ಗೋವಿಂದ ಹೆಗಡೆ

ಸೋಜಿಗ
ಹೊಲದ ಒಡತಿಯ ಸೆರಗು
ಸೋಕಿ
ಹುಲ್ಲು ಕಡ್ಡಿಯಲಿ
ತೆನೆ ಕಾಳು ಕಟ್ಟಿತು !
  -- ಶಿವಕುಮಾರ ಸಾಯ

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan