ಖುಷಿ

ಸದಾ ಖುಷಿಯಾಗಿರಲು
ಏನಿರಬೇಕು?
ಬಾಳಿನಲ್ಲಿ ದಿನವು ಹನಿ
ಮೂನಿರಬೇಕು
ನನ್ನ ತೋಳಿನಲ್ಲಿ ಪ್ರಿಯೆ
ನೀನಿರಬೇಕು
ಬೇಸಿಗೆಯಾದ್ದರಿಂದ ಫ್ಯಾನಿರಬೇಕು...!!!

ನಲ್ಲೆ

ನೆನ್ನೆ ಆಕೆ ಇಂದು ಈಕೆ
ನಾಳೆ
ಇನ್ನೊಬ್ಬ ನಲ್ಲೆ
ಹೆಣ್ಣೆಂದರೆ
ಹುಡುಗರಿಗೆ
ಟೀವಿ ಚಾ - ನಲ್ಲೆ ?? 

ಸುಸ್ತು

ನಡೆಯಲಿಲ್ಲ

ಓದಲಿಲ್ಲ

ಕಾರಲ್ಲಿ ಬಂದರೂ ಇಷ್ಟೊಂದು ಸುಸ್ತೆ ?

ಹೌದು ಮಾರಾಯ್ರೆ

ಹಾಗಿದೆ ನಮ್ಮ ರಸ್ತೆ

ಸುದ್ದಿ

ದಿನಪತ್ರಿಕೆಯಲ್ಲಿ ಬಂತೊಂದು ಸುದ್ದಿ

ಮಂಗಳೂರಿನಲ್ಲಿ ಮಲೇರಿಯ ಹಾವಳಿ

ಮರುದಿನ ಅದು ಬಂತು ತಿದ್ದಿ

ಅಲ್ಲ ಮಲೆಯಾಳಿ ಹಾವಳಿ ... !! 

ಬದಲಾವಣೆ

ಕಾಶಿ, ರಾಮೇಶ್ವರ

ಅನ್ನುತ್ತಿದ್ದ ತಾತ

ಶುರು ಮಾಡಿದ್ದಾನೆ ಈಗ

ಹೊಸ ವರಾತ..

ನೋಡಬೇಕು ಶಿಮ್ಲಾ,ಕಾಶ್ಮೀರ, ಆಗ್ರಾ

ಎಲ್ಲೋ ಸಿಕ್ಕಿರಬೇಕು ವಯಾಗ್ರ..!!

ಕಂಬಳಿ

ಹೇಗೆ ತಡೆಯಲಿ ಮೈ ನಡುಗುವ ಚಳಿ??

ಇಲ್ಲ ನನ್ನ ಬಳಿ ಹೊಡೆಯಲು ಕಂಬಳಿ..

ಆದ್ರಿಂದ ಪ್ರಿಯೆ ನೀನೆ

come ಬಳಿ ...!!!

ವರ

ಕೊಡು ದೇವರೆ ವರ

ಪೊಳ್ಳು ಭರವಸೆನೀಡದಂಥ

ಆಡದೇ ಮಾಡುವಂಥ ಸಚಿ-ವರ..!!!
********
 

ಗುಜರಿ

ಮುದುಕಿ: ರೀ, ನಮ್ಮನೆ ಎದುರಿಗೆ ಇರೋ

ಗುಜರಿ ಅಂಗಡಿಯ ಹುಡುಗ ನನ್ನ

ನೋಡಿ ದಿನಾ ನಗ್ತಾನೆ..

ಮುದುಕ: ಇರ್ಲಿ ಬಿಡೇ.. ಅವನಿಗೆ ಯಾವಾಗಲು

ಹಳೆ ಸಾಮಾನ್ ಮೇಲೇನೆ ಕಣ್ಣು...!!!

ಈ ಪ್ರೀತಿ ಅಂದ್ರೆ ಹೀಗೆನಾ??

ಮೋಸ ಮಾಡಿ ಪ್ರೀತ್ಸು

ಆದ್ರೆ ಪ್ರೀತ್ಸಿ ಮೋಸ ಮಾಡಬೇಡ..

ಯೋಚಿಸಿ ಪ್ರೀತಿ ಮಾಡು

ಆದ್ರೆ ಪ್ರೀತಿಸಿ ಯೋಚಿಸಬೇಡ.

*******

ಹುಡುಗಿಯರ ಹಿಂದೆ ಯಾಕೆ ಬೀಳ್ತೀಯ ದಡ್ಡ

ಅವರಿಗಾಗಿ ಯಾಕೆ ವೇಸ್ಟ್ ಮಾಡ್ತೀಯ ದುಡ್ಡ

ಅವಳು ಸಿಗದಿದ್ದಾಗ ಬಿಡ್ತೀಯ ಮೀಸೆ ಗಡ್ಡ

ಅವಳು ಕೈ ಕೊಟ್ಟಾಗ ಹುದುಕ್ತೀಯ ಗುಡ್ಡ..!!

ಹುಡುಗೀರೆ ಹೀಗೆ

ನಾನು ಮೂರು ವರ್ಷದವನಾಗಿದ್ದಾಗ ಬೇಡ ಬೇಡ ಅಂದ್ರು ಹುಡುಗಿಯರು ಮುತ್ತು ಕೊಡ್ತಿದ್ರು ಈಗ ಇಪ್ಪತ್ತೊಂದು ವರ್ಷ ಬೇಕು ಬೇಕು ಅಂದ್ರು ಒಬ್ರೂ ಮುತ್ತು ಕೊಡಲ್ಲ... ನೀಯತ್ತಿಲ್ಲದ ಹುಡುಗೀರು.

ಡುಂಡಿ ರಾಜ್ ರವರ ಹನಿಗವನಗಳು

ತೊಂಬತ್ತು ವರ್ಷದವನೊಬ್ಬ

ಅಪ್ಪನಾದನಂತೆ

ವಿಚಿತ್ರ ! ಆದರೂ ನಿಜ.

ಮುದ್ದು ಮುದ್ದಾದ

ಗಂಡು ಮಗು

ಹೆಸರು ವಯಾಗ್ರಜ !!

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan