ಕೃತಜ್ಞತೆ ಮತ್ತು ನಂಟು

ಕಳೆದವಾರ ತರಂಗದಲ್ಲಿ ಬಂದ ದೊರೆಸ್ವಾಮಿ ಅವರು ಬರೆದ ಹನಿಗವನ. ನಿಮಗೆ ಇಷ್ಟವಾಗಬಹುದು:

ಕೃತಜ್ಞತೆ 
ನಾನು ಹೊಳೆಯ ದಾಟಲು ಬಂದವನು
ದಾಟಿಸಲು ದೋಣಿ ತಂದವನು ನೀನು
ಹುಟ್ಟು ಹಾಕಿ ದೋಣಿಯನ್ನು
ದಡದಿಂದ ದಡಕ್ಕೆ
ಸಾಗಿಸುವುದಷ್ಟೇ ನಿನ್ನ ಕೆಲಸ
ದಡ ಸೇರಿದ ಮೇಲೆ
ಕೃತಜ್ಞತೆ ಹೇಳುವುದಷ್ಟೇ ನನ್ನ ಕೆಲಸ!!


ಇನ್ನೊಂದು ನನಗೆ ಇಷ್ಟವಾದ ಹನಿಗವನ, ಜರಗನಹಳ್ಳಿ ಶಿವಶಂಕರ್ ಬರೆದದ್ದು.

ನಂಟು 
ಮನುಷ್ಯನ ಬದುಕಿಗೆ
ಅನ್ನ, ನೆರಳು ನೀಡಿ
ಬೆಳಸಿದ ತಪ್ಪಿಗೆ
ತಾನೂ ಉರಿವುದು
ಕಟ್ಟಿಗೆಯಾಗಿ
ದೇಹದ ಒಟ್ಟಿಗೆ
ಚಿತೆಯಲ್ಲಿ ಕೊನೆಗೆ ...

ನನ್ನ ಆರ್ಕುಟ್ ಅಪ್‌ಡೇಟ್ಸ್

ಹಾಯ್ ಫ್ರೆಂಡ್ಸ್ .. ಈ ಕೆಳಗಿನ ಸಾಲುಗಳು ನನ್ನ ಇತ್ತೀಚಿನ ಆರ್ಕುಟ್/Twitter updates. ನಿಮಗೆ ಇಷ್ಟ ಆಗಬಹುದು ಅಂತ:


ನಮ್ಮಿಬ್ಬರ ಸುಖ ದಾಂಪತ್ಯದ ಗುಟ್ಟು: ಸಣ್ಣ ಪುಟ್ಟ ನಿರ್ಧಾರ ಎಲ್ಲ ಅವಳಿಗೆ ಬಿಟ್ಟು ನಾನು ಕೇವಲ ಮಹತ್ವದ ನಿರ್ಧಾರ ತಗೋತೀನಿ. ಉದಾಹರಣೆಗೆ, ನನ್ ಹೆಂಡ್ತಿಯ ನಿರ್ಧಾರಗಳು: ಮನೆ ಖರ್ಚು ವೆಚ್ಚ, ಹೊಸ ಸಾಮಾನು, ಬಟ್ಟೆ ಬರೆ, ಹಣ ಉಳಿತಾಯ, ಗಿಫ್ಟ್ಸ್. ನಾನು: ರಾಜ್ಯದ ಮುಂದಿನ ಸಿಯಮ್ ಯಾರಾಗ್ಬೇಕು, ಇಂಡಿಯಾ ಅಮೇರಿಕ ಸಂಬಂಧ, ಭಾರತ-ಪಾಕ್ ಮಾತುಕತೆ,,, ಹೀಗೆ!!


ಭೂಮಿ ಮೇಲೆ ಒಳ್ಳೇ ಹುಡುಗೀರು ಅಂತ ಇರೋದೆಲ್ಲ ಸುಳ್ಳು. ನಿಜ ಏನಪ್ಪಾ ಅಂದ್ರೆ, ಆವ್ರು ಸಿಕ್ಕಿ ಬಿದ್ದೀರೋಲ್ಲ ಅಷ್ಟೇ!!


ರಾಜಕಾರಣಿಗಳಿಗೂ, ಚಡ್ದಿಗೂ ಒಂದು ಸಾಮ್ಯ. ಎರಡನ್ನೂ ಕಾಲ ಕಾಲಕ್ಕೆ ಬದಲಾಯಿಸಬೇಕು ಮತ್ತು ಒಂದೇ ಕಾರಣಕ್ಕೆ ಕೂಡ.

ಚಂದ್ರನ ಕುರಿತಾದ ಹನಿಗವನಗಳು - ಭಾಗ ೨

ಚಂದ್ರ ಚುಟುಕು - ೨

ಬೃಹತ್
ನೃತ್ಯ ಸಮಾವೇಶ
ಬಾನಂಗಳ ತುಂಬೆಲ್ಲಾ
ತಾರೆಗಳ ನರ್ತನ
ನಿತ್ಯ ನಿರಂತರ -
ಪ್ರೇಕ್ಷಕ
ಒಬ್ಬಂಟಿ ಚಂದಿರ!

*********

ಶುಕ್ಲಪಕ್ಷದಲಿ
ಗಮ್ಮತ್ತು
ಕೃಷ್ಣಪಕ್ಷದಲಿ
ದಯಟ್ಟು
ಚಂದ್ರನ
ಆರೋಗ್ಯದ ಒಳಗುಟ್ಟು !!

*******

ಮತ್ತೇರಿ ಕುಣಿಯುತ್ತಿದ್ದಾರೆ
ನರ್ತಕಿಯರು
ದಣಿವಿಲ್ಲದ ಹಾಗೆ -
ಬೆಳದಿಂಗಳ
ಕುಡಿದ ಮಾತ್ರಕ್ಕೇ
ಆಗುವುದೇ ಹೀಗೆ ?

    --- ಅರವಿಂದ ದೀಕ್ಷಿತ್

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan