ಯಾವ ಮೋಹನ ಮುರಳಿ ಕರೆಯಿತು

ಯಾವ ಮೋಹನ ಮುರಳಿ ಕರೆಯಿತುದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಿಂಚಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಒಳಗೆ ಕರಣ ಗಣದಿರಿಂಗಣ ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ ವಿವಶವಾಯಿತು ಪ್ರಾಣ ಹಾ ! ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು ಯಾವೆ ಬ್ರಿನ್ದವನವು ಚಾಚಿತು ತನ್ನ ಮಿಂಚಿನ ಕೈಯನು ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan