ದೋಣಿ
ಮುಳುಗುವ ದೋಣಿ ಎಂಬ ಖಚಿತ ಧಾವಂತದಲ್ಲಿ
ಬಂಧುಗಳೆಲ್ಲಾ ಹೊರ ಜಿಗಿದಾಗ,
ಭಾರ ಕಡಿಮೆಯಾಗಿ
ದೋಣಿ ಮುಳುಗಲೇ ಇಲ್ಲ.
-- ಡಾ| ಶಾಂತಲಕ್ಷ್ಮಿ
ಪರಿಮಳದ ಮನೆ
ಕಲ್ಲೊಂದು ಪೊದೆಗೆ ಬಿದ್ದಾಗ
ಹಕ್ಕಿ ರಿವ್ವನೆ ಹಾರಿತು
ಮೊಲ ಛಂಗನೆ ನೆಗೆಯಿತು
ಹಾವು ಹೆಡೆಯೆತ್ತಿ ಸರಿಯಿತು
ಕಲ್ಲು ಹೃದಯದಿಂದ
ಭಯದ ಅಲೆಗಳು.
ಹೂವೊಂದು ಗಿಡದಲ್ಲಿ ಅರಳಿದಾಗ
ದುಂಬಿ ಹಾರಿ ಬಂತು
ಚಿಟ್ಟೆ ತೇಲಿ ಬಂತು
ಹುಡುಗಿ ಓಡಿ ಬಂದಳು
ಹೂವಿನ ಒಡಲಿಂದ
ಖುಷಿಯ ತರಂಗಗಳು.
ಕಲ್ಲಿಗೆ ಕಮಟು ವಾಸನೆ
ಹೂವು ಪರಿಮಳದ ಮನೆ.
-- ರವಿಶಂಕರ oddambettu
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ