ಯಾವ ಮೋಹನ ಮುರಳಿ ಕರೆಯಿತುದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಿಂಚಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಒಳಗೆ ಕರಣ ಗಣದಿರಿಂಗಣ ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ ವಿವಶವಾಯಿತು ಪ್ರಾಣ ಹಾ ! ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು ಯಾವೆ ಬ್ರಿನ್ದವನವು ಚಾಚಿತು ತನ್ನ ಮಿಂಚಿನ ಕೈಯನು ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು.
ಯಾವ ಮೋಹನ ಮುರಳಿ ಕರೆಯಿತು
ಅಮ್ಮ ನಾನು ದೇವರಾಣೆ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನೆಲುವಲ್ಲಿ ಹೇಗೆ ತಾನೆ ತೆಗೆಯಲೆ ಅಮ್ಮ ನನ್ನ ಪುಟ್ಟ ಕೈಗಳಲಿ ಶಾಮ ಹೇಳಿದಾ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ ಬೆಣ್ಣೆ ಒರೆಸಿದ ಕೈಯ್ಯ ಬೆನ್ನ ಹಿಂದೆ ಒರೆಸುತ್ತ ಎತ್ತಿದ ಕೈಯ್ಯ ಕಡೆಗೊಲನ್ನು ಮೂಲೆಲಿಟ್ಟು ನಕ್ಕಳು ಗೋಪಿ ಸೂರದಾಸ ಪ್ರಿಯ ಶಾಮನ ಮುತ್ತಿಟ್ಟು ನಕ್ಕಳು ಗೋಪಿ
Labels:
ಮೈಸೂರು ಅನಂತ ಸ್ವಾಮಿ
Search all your queries
Custom Search