ಹೊವಿನಂತ ಹುಡುಗ ನಾನು ತುಂಬ ಮೃದು

ಶಿವ ಅಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ಕಂಡು ಕಂಡು ಬಿದ್ದಂಗಾಯಿತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಾಂಗಾಯಿತು ಹಾರ್ಟಿನಲಿ
ಕಚಗುಳಿ ಇಟ್ಟಾಂಗಾಯಿತು ಬೆನ್ನಿನಲಿ
ನೀ ಕುಂತಾಗ ಬೈಕಿನಲಿ
ಬೈಕಿನಲಿ...ಬೈಕಿನಲಿ...ಬೈಕಿನಲಿ

ಟಾಪು ಗೇರು.. ಹಾಕಂಗಿಲ್ಲ
ಸುಮ್ನೆ ಬ್ರೇಕು.. ಹೊಡ್ಯಂಗಿಲ್ಲ
ಟಾಪು ಗೇರು ಹಾಕಂಗಿಲ್ಲ... ಸುಮ್ನೆ ಬ್ರೇಕು ಹೊಡ್ಯಂಗಿಲ್ಲ
ಅಯ್ಯೊ ಪಾಪ ಹುಡ್ಗಿ ಜೀವ ಹೆದರುವುದು
ತು ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು

ಒಂದು ಮಾತು.. ಕೇಳಲಿಲ್ಲ
ಒಂದು ಮಾತು ಕೇಳಲಿಲ್ಲ..ಹಿಂದೆ ಮುಂದೆ ನೋಡಲಿಲ್ಲ
ನನ್ನ ಎದೆ ಸೈಟನು ಕೊಂಡುಕೊಂಡು ತಡ ಮಾಡದೆ ಪಾಯವ ತೋಡಿ ಬಿಟ್ಲು
ಹೊವಿನಂತ ಹುಡುಗ ನಾನು ತುಂಬ ಮೃದು
ಹೊವಿನಂತ ಹುಡುಗ ನಾನು ತುಂಬ ಮೃದು
ಹೆಣ್ ಮಕ್ಳೇ ಸ್ಟ್ರಾಂಗು ಗುರು
ರಾಂಗು ಗುರು.. ರಾಂಗು ಗುರು.. ರಾಂಗು ಗುರು..ರಾಂಗು ಗುರು

ಶಿವ ಅಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ಉಣ್ಣಲಿಲ್ಲ.. ತಿನ್ನಲಿಲ್ಲ.. ಮಟ ಮಟ.. ಮಧ್ಯಾನವೇ
ಉಣ್ಣಲಿಲ್ಲ ತಿನ್ನಲಿಲ್ಲ ಮಟ ಮಟ ಮಧ್ಯಾನ
ಕುಂತು ಬಿಟ್ಳು ಹಿಂದುಗಡೆ ಸೀಟಿನಲಿ
ನಾವ್ ಹೊಡ್ಕೋ ಬೇಕು ನಮ್ಮದೆ ಬೂಟಿನಲಿ..

ಸುಮ್ನೆ, ತಮಾಷೆಗಾಗಿ :)

ಆಕ್ಟಪಸ್ ಪೌಲ್ ತಲೆ ತಿರುಗಿ ಬಿತ್ತಂತೆ!!
ಯಾರೋ, ಇಂಡಿಯಾ ಯಾವಾಗ ಪೀಫ ವರ್ಲ್ಡ್ ಕಪ್
ಗೆಲ್ಲುತ್ತೆ ಅಂತ ಕೇಳಿದ್ರಂತೆ!!!

****

ಸಂತ: ನೆನ್ನೆ ರಾತ್ರಿ ಪಾರ್ಟಿಲಿ ಹುಡುಗೀನ ರೇಪ್ನಿಂದ ಬಚಾವ್ ಮಾಡ್ದೆ.
ಬಂತಾ: ಓಹ್, ಗುಡ್. ಹೇಗೆ?
ಸಂತ: ಸೆಲ್ಫ್ ಕಂಟ್ರೋಲ್ ಮಗಾ!!!

****

ನಿಮ್ ಹತ್ರ ಒಳ್ಳೇ ಎಸ್ಸೆಮ್ಮೆಸ್ ಇವೆಯೇ? ೯೮೮೬೮೪೧೦೮೫ಗೆ ಫಾರ್‌ವರ್ಡ್ ಮಾಡಿ.
ಅಡ್ವಾನ್ಸ್ ಧನ್ಯವಾದಗಳು :)

My Kannada SMS Collection

Today is my SMS updating day!! Yes, every week I'll receive around 600 SMS and I try to translate best of them in my mother tongue Kannada. 


This is just a timepass activity I'm indulging in. So if U find any mistakes in Kannada grammar or any other errors, please be kind enough leave a comment. I'll try to correct them.


ಸರ್ದಾರ್ಜಿ ಗ್ರೆನೇಡ್ ಎಸೆದ್ರೆ ಏನ್ ಮಾಡ್ಬೇಕು?
ಅದರ ಪಿನ್ ತೆಗೆದು ವಾಪಸ್ ಅವನ್ಗೆನೆ ಎಸಿಬೇಕು!!!


ಕಾರು ಸಾಲ ಮರುಪಾವತಿ ಮಾಡದೆ ಇದ್ದುದ್ದಕ್ಕೆ ಬ್ಯಾಂಕ್ನವರು ಕಾರನ್ನು ವಾಪಸ್ ತೆಗೆದುಕೊಂಡು ಹೋದಾಗ, ಮದುವೆಗೂ ಸಾಲ ಮಾಡಬಾರದಿತ್ತೆ ಅನ್ನಿಸಿತ್ತು ತಿಂಮನಿಗೆ!!!


ನಾನು ಅಂತ್ಯದ ಆರಂಭ.
ಅರಿಶಡ್ವರ್ಗಗಳಲ್ಲಿ ನನ್ನನ್ನು ಕಾಣಬಹುದು.
ಅನಂತಾನಂತಗಳಲ್ಲಿ ನಾನಿದ್ದೇನೆ.
ಅಡಿಕೆ ಮರದಲ್ಲಿ, ಮುದುಕಿಯ ಅಡಿಗೋಲಿನಲ್ಲಿ ಅಡಗಿದ್ದೀನಿ.
ಅಭಿಸಾರಿಕೆಯ ಪ್ರೀತಿ, ಅಪ್ಪನ ಅಪ್ಪುಗೆಯಲ್ಲೂ ನಾನಿದ್ದೇನೆ ಗೊತ್ತೇ!!
ಹಾಗಾದರೆ ನಾನ್ಯಾರು ಹೇಳಿ ಮತ್ತೆ??

ಕಡುಬಡತನ

ವೈದ್ಯರ ಸಮ್ಮೇಳನ ನಡೆಯುತ್ತಿತ್ತು. ಹೊರಗೆ
ಕಡು ಬಡವಿಯೊಬ್ಬಳು ಅಳುತ್ತಿದ್ದಳು.

"ಮದ್ದಿದ್ದರೆ ಕೊಡಿ ಸ್ವಾಮಿ,
ಹರಕಲು ಗುಡಿಸಲುಗಳಲ್ಲಿ ಆಸೆಗಳೇ ಏಳದಂತೆ,
ಮುರುಕಲು ಮನೆಗಳಲ್ಲಿ ಆಕಾಂಕ್ಷೆಗಳೇ ಆರುವಂತೆ,
ಬಡವರ ಹಸಿವೇ ಇಂಗುವಂತೆ,
ಮದ್ದಿದ್ದರೆ ಕೊಡಿ."

  - ಡಾ. ಅನುರಾಧಾ ಕಾಮತ್

ಜಗವೆಂಬ ಸಂಗೀತ ವಿದ್ಯಾಲಯ

ಆತ ಸಂಗೀತ ಕಲಿಯಲಾರಂಭಿಸಿದ್ದ.
ಅವನಿಗೀಗ ಅರಿವಾಗತೊಡಗಿತ್ತು.

ಸಂಗೀತವರಿಯದ ಅಜ್ಜಿ
ಭಜನೆಯ ಕೊನೆಯಲ್ಲಿ ಭೈರವಿಯೆ ಹಾಡುತ್ತಿದ್ದಳು.

ರೈಲಿನ ಶಿಳ್ಳೆ ಪಂಚಮದಲ್ಲಿತ್ತು.

ಕುದುರೆಯ ಖುರಪುಟದ ಸದ್ದಿನಲ್ಲೂ
ತಾಳಲಯವಿತ್ತು.

ಹಕ್ಕಿಯ ಚಿಲಿಪಿಲಿ, ಮಕ್ಕಳ ನಗು,
ಆಕಳ ಅಂಬಾ, ಎಲ್ಲಿಲ್ಲ ಸಂಗೀತದ ಸ್ಪರ್ಶ!

     - ಡಾ. ಅನುರಾಧಾ ಕಾಮತ್

ನಿನ್ನದೇ ಹೆಸರು ನಿನಗೆ ತಿಳಿಯದೆ

ಗಾಡಿ ಬಂದ ಸದ್ದಿಗೆ ಹೊರಗಿಣುಕಿದೆ
ಅತ್ತೆ ಇಳಿಯುತ್ತಿದ್ದಳು ಮೊದಲು
ನೂರೆಂಟು ಚೀಲ ಪೆಟ್ಟಿಗೆಗಳು ಹಿಂದೆ
ಅನಂತರ ಇಳಿದವಳು ಅತ್ತೆ ಮಗಳು

ಚಡ್ಡಿ ಚೋಟು ಲಂಗದ ವಯಸೇ ಕೊನೆ
ಅಂದಿನಿಂದೀಚೆಗೆ ನೋಡಿದ್ದೇ ಇಲ್ಲ
ಬೇಲಿ, ಬಾವಿ ತಿರುಗಿದ್ದುದು ಒಂದೇ ಸಮನೆ
ಅವಳಿಗೆ ನೆನಪಿರಲಿಕ್ಕಿಲ್ಲ

ಒಳಗಡಿಯಿಟ್ಟ ಅತ್ತೆ ಕೈ ತೋರಿದಳು
"ಇವನಾರು ಗುರುತಾಯಿತೇನೆ"

ತಡವರಿಸಿ ಹೇಳಲು ಮೊದಲು
ನಕ್ಕು ನುಡಿದೆ "ನಾನು ನಾನೆ"

ಭಯವೋ ಬಿಗುಮಾನವೋ
ಸಂಕೋಚವೋ ಕಾಣೆ
ಯಾವಾಗಲಾದರೂ ಸರಿ ಮೌನ ಮೌನ,
ಮೌನದೊಳಗೇ ಮಾತನಾಡುವ ಜಾಣೆ
ಮೂಕ ಭಾಷೆಯಲ್ಲೊಂದೆನೋ
ಅನುಮಾನ


ಏನೋ ಕಾರಣಕೆ ಮಾತು ಬೆಳೆದು ಬಿದ್ದಿತ್ತು
ಅಪ್ಪ ಅತ್ತೆಯರ ನಡುವೆ ಬೇಲಿ
ಹತ್ತಾರು ವರ್ಷದ ಮೇಲೆ ವೈಮನಸ್ಯ ಕಳೆದು
ತಿಳಿಯಾಗಿದೆ ಮನಸು ಈ ಬೇಲಿ ತೇಲಿ

ಹೆಣ್ಣು ದಿಕ್ಕಿರದ ಮನೆಯೊಳಗೆ
ಗೌರಿ ಹಬ್ಬ ಅದೆಂಥ ಚೆಂದ?
ಆದರೀ ವರ್ಷದ ಹುಣ್ಣಿಮೆಗೆ
ಸಡಗರ ಅವಳಿರುವುದರಿಂದ

ಮುದುಕಿಯ ಕೆಣಕಾಟ ಎದುರು ಬಾಗಿಲಲಿ
"ಹೆಸರು ಹೇಳದೇ ಒಳಗಡಿಯ ಇಡದಿರು"
ಆರತಿಯ ಹುಡುಗಿ ಹೇಳಿದಳು ನಾಚಿಕೆಯಲಿ
ತನ್ನ ಗಂಡನಾಗುವವನ ಹೆಸರು

ಈಗ ನನ್ನ ಸರದಿ, ಎದುರಿನಲಿ ನನ್ನ ಹುಡುಗಿ
ಕೈಯೊಳಗೆ ಆರತಿಯ ತಟ್ಟೆ
ಬಾಗಿಲಲಿ ತಡೆದರೆ ಪ್ರಶ್ನಿಸಿದಳು ಮೆದುವಾಗಿ
"ಏನು? ಕೈ ಏಕೆ ಅಡ್ಡ ಇಟ್ಟೆ?"

"ಅತ್ತೆಯ ಮಗಳೆ, ದಾಟದಿರು ಹೊಸಿಲು
ಬಿಡಲಾರೆ ಒಳಗೆ ಹೆಸರ ಹೇಳದೇ"
ಕಣ್ಣು ಮಿಟುಕಿಸಿಯವಳು ಹೇಳಿದ್ದೊಂದೇ ಸಾಲು
"ನಿನ್ನದೇ ಹೆಸರು ನಿನಗೆ ತಿಳಿಯದೆ."

            - ಚಿದಾನಂದಯ್ಯ ಏನ್.ಎಂ.

ಮಲೆಗಳಲ್ಲಿ ಮದುಮಗಳು

ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ!

ಇಲ್ಲಿ
ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ
ಕೊನೆ ಮುಟ್ಟುವುದು ಇಲ್ಲ

ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ
ಎಲ್ಲಕ್ಕೂ  ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!

        - ಕವಿ ಕುವೆಂಪು ತಮ್ಮ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯಲ್ಲಿ ಓದುಗರಿಗೆ ಹೇಳಿದ ಈ ಮಾತು, ನಾಟಕಕ್ಕೂ ಅನ್ವರ್ಥ.

ಒಂದು ಸತ್ಯ

ಅಭಿವೃದ್ಧಿ ಯೋಜನೆಗೆ ಹಳ್ಳಿಗರ ತ್ಯಾಗ
ಪಟ್ಟಣದ ಜನಗಳಿಗೆ ಫಲದ ಬಹು ಭಾಗ
ಈ ವ್ಯಥೆಯ ಕಥೆಗುಂಟು ಬಗೆಬಗೆಯ ಬಣ್ಣ
ಒಂದು ಕಣ್ಣಿಗೆ ಬೆಣ್ಣೆ, ಒಂದಕ್ಕೆ ಸುಣ್ಣ...
                     - ಪಳಕಳ ಸೀತಾರಾಮ ಭಟ್ಟ

ರೈತ

ಕೃತಕ ಮಳೆಯ
ಮೊದಲ ಹನಿ
ಬಿತ್ತು,
ನೇಣು ಹಾಕಿಕೊಂಡ
ರೈತನ ಹಗ್ಗದ
ಮೇಲೆ.
  --- ವಿ.ಪುಗಳೆಂದಿ

ಕೃತಜ್ಞತೆ ಮತ್ತು ನಂಟು

ಕಳೆದವಾರ ತರಂಗದಲ್ಲಿ ಬಂದ ದೊರೆಸ್ವಾಮಿ ಅವರು ಬರೆದ ಹನಿಗವನ. ನಿಮಗೆ ಇಷ್ಟವಾಗಬಹುದು:

ಕೃತಜ್ಞತೆ 
ನಾನು ಹೊಳೆಯ ದಾಟಲು ಬಂದವನು
ದಾಟಿಸಲು ದೋಣಿ ತಂದವನು ನೀನು
ಹುಟ್ಟು ಹಾಕಿ ದೋಣಿಯನ್ನು
ದಡದಿಂದ ದಡಕ್ಕೆ
ಸಾಗಿಸುವುದಷ್ಟೇ ನಿನ್ನ ಕೆಲಸ
ದಡ ಸೇರಿದ ಮೇಲೆ
ಕೃತಜ್ಞತೆ ಹೇಳುವುದಷ್ಟೇ ನನ್ನ ಕೆಲಸ!!


ಇನ್ನೊಂದು ನನಗೆ ಇಷ್ಟವಾದ ಹನಿಗವನ, ಜರಗನಹಳ್ಳಿ ಶಿವಶಂಕರ್ ಬರೆದದ್ದು.

ನಂಟು 
ಮನುಷ್ಯನ ಬದುಕಿಗೆ
ಅನ್ನ, ನೆರಳು ನೀಡಿ
ಬೆಳಸಿದ ತಪ್ಪಿಗೆ
ತಾನೂ ಉರಿವುದು
ಕಟ್ಟಿಗೆಯಾಗಿ
ದೇಹದ ಒಟ್ಟಿಗೆ
ಚಿತೆಯಲ್ಲಿ ಕೊನೆಗೆ ...

ನನ್ನ ಆರ್ಕುಟ್ ಅಪ್‌ಡೇಟ್ಸ್

ಹಾಯ್ ಫ್ರೆಂಡ್ಸ್ .. ಈ ಕೆಳಗಿನ ಸಾಲುಗಳು ನನ್ನ ಇತ್ತೀಚಿನ ಆರ್ಕುಟ್/Twitter updates. ನಿಮಗೆ ಇಷ್ಟ ಆಗಬಹುದು ಅಂತ:


ನಮ್ಮಿಬ್ಬರ ಸುಖ ದಾಂಪತ್ಯದ ಗುಟ್ಟು: ಸಣ್ಣ ಪುಟ್ಟ ನಿರ್ಧಾರ ಎಲ್ಲ ಅವಳಿಗೆ ಬಿಟ್ಟು ನಾನು ಕೇವಲ ಮಹತ್ವದ ನಿರ್ಧಾರ ತಗೋತೀನಿ. ಉದಾಹರಣೆಗೆ, ನನ್ ಹೆಂಡ್ತಿಯ ನಿರ್ಧಾರಗಳು: ಮನೆ ಖರ್ಚು ವೆಚ್ಚ, ಹೊಸ ಸಾಮಾನು, ಬಟ್ಟೆ ಬರೆ, ಹಣ ಉಳಿತಾಯ, ಗಿಫ್ಟ್ಸ್. ನಾನು: ರಾಜ್ಯದ ಮುಂದಿನ ಸಿಯಮ್ ಯಾರಾಗ್ಬೇಕು, ಇಂಡಿಯಾ ಅಮೇರಿಕ ಸಂಬಂಧ, ಭಾರತ-ಪಾಕ್ ಮಾತುಕತೆ,,, ಹೀಗೆ!!


ಭೂಮಿ ಮೇಲೆ ಒಳ್ಳೇ ಹುಡುಗೀರು ಅಂತ ಇರೋದೆಲ್ಲ ಸುಳ್ಳು. ನಿಜ ಏನಪ್ಪಾ ಅಂದ್ರೆ, ಆವ್ರು ಸಿಕ್ಕಿ ಬಿದ್ದೀರೋಲ್ಲ ಅಷ್ಟೇ!!


ರಾಜಕಾರಣಿಗಳಿಗೂ, ಚಡ್ದಿಗೂ ಒಂದು ಸಾಮ್ಯ. ಎರಡನ್ನೂ ಕಾಲ ಕಾಲಕ್ಕೆ ಬದಲಾಯಿಸಬೇಕು ಮತ್ತು ಒಂದೇ ಕಾರಣಕ್ಕೆ ಕೂಡ.

ಚಂದ್ರನ ಕುರಿತಾದ ಹನಿಗವನಗಳು - ಭಾಗ ೨

ಚಂದ್ರ ಚುಟುಕು - ೨

ಬೃಹತ್
ನೃತ್ಯ ಸಮಾವೇಶ
ಬಾನಂಗಳ ತುಂಬೆಲ್ಲಾ
ತಾರೆಗಳ ನರ್ತನ
ನಿತ್ಯ ನಿರಂತರ -
ಪ್ರೇಕ್ಷಕ
ಒಬ್ಬಂಟಿ ಚಂದಿರ!

*********

ಶುಕ್ಲಪಕ್ಷದಲಿ
ಗಮ್ಮತ್ತು
ಕೃಷ್ಣಪಕ್ಷದಲಿ
ದಯಟ್ಟು
ಚಂದ್ರನ
ಆರೋಗ್ಯದ ಒಳಗುಟ್ಟು !!

*******

ಮತ್ತೇರಿ ಕುಣಿಯುತ್ತಿದ್ದಾರೆ
ನರ್ತಕಿಯರು
ದಣಿವಿಲ್ಲದ ಹಾಗೆ -
ಬೆಳದಿಂಗಳ
ಕುಡಿದ ಮಾತ್ರಕ್ಕೇ
ಆಗುವುದೇ ಹೀಗೆ ?

    --- ಅರವಿಂದ ದೀಕ್ಷಿತ್

ಝೆನ್ ಕಥೆ

ಒಬ್ಬ ಗುರುವಿನ ಬಳಿಯಲ್ಲಿ ಶಿಷ್ಯನೊಬ್ಬ ಕೇಳುತ್ತಾನೆ,
"ನನಗೆ ಝೆನ್ ಎಂದರೇನೆಂದೇ ಅರ್ಥವಾಗುತ್ತಿಲ್ಲ."
"ಅರ್ಥವಾಗುವಂಥದ್ದಲ್ಲ , ಅದು!"
"ಅರ್ಥ ಮಾಡಿಸುವಿರಾ?"
"ಈ ಜಗತ್ತಿನಲ್ಲಿ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
ನಿನ್ನ ತಾಯಿಯ ಪ್ರೀತಿ ನಿನಗೆ ಅರ್ಥವಾಗಿದೆಯೆ?"
    ಶಿಷ್ಯ ಸುಮ್ಮನಾಗುತ್ತಾನೆ.

Janagala sulige

ಜನಗಳ ಸುಲಿಗೆ ಮಾಡುವ
ಈ ಕರೆಂಟು ಇಲ್ಲದೇ ಇದ್ದಿದ್ದರೆ
ಒಬ್ಬೊಬ್ಬನಿಗೂ ಒಂದೊಂದು
ಪಂಜು ಹುಡುಕುವ ತಾಕತ್ತು ಬರುತ್ತಿತ್ತು
ಯಾವುದೇ ಬೀಜದ ಎಣ್ಣೆ ಸುರಿದು
ಹೊತ್ತಿಸಿಕೊಂಡು ಓಡಾಡಬಹುದಿತ್ತು
ಕರೆಂಟು ಕೈಲಿ ಹಿಡಿದವರೆಲ್ಲ
ಕೊನೆ ಕಂಡರು
ಪಂಜು ಹಿಡಿದವರೆಲ್ಲ
ಮನೆ ಮುಟ್ಟಿದರು.

      -- ಸಿ.ವಿ.ಶೇಷಾದ್ರಿ ಹೊಳವನಹಳ್ಳಿ

K. S. Narasimha Swami Poems

      ಅವಳ ಬಣ್ಣ ಕೊಂಚ ಕಪ್ಪು
ಆದರೇನು ನನಗೆ ಒಪ್ಪು
      ಕಪ್ಪು ಬಣ್ಣವಾದರೇನು
ಮೈಯು ಪ್ರೇಮ ಕರಿಯದೆ?
      ಒಪ್ಪೆ ಮನವು ಕಪ್ಪು ಮೀರಿ
ಒಲವು ಹರಿಯದೆ?
      ಎನ್ನ ರನ್ನೆ... ಕಣ್ಣ ಮುಂದೆ
ಮಿಂಚಿ ಮೆರೆದು ಸೆಳೆದಳೆನ್ನನು...

*******

ಹನಿಗವನಗಳು

ದೋಣಿ
ಮುಳುಗುವ ದೋಣಿ ಎಂಬ
ಖಚಿತ ಧಾವಂತದಲ್ಲಿ
ಬಂಧುಗಳೆಲ್ಲಾ ಹೊರ ಜಿಗಿದಾಗ,
ಭಾರ ಕಡಿಮೆಯಾಗಿ
ದೋಣಿ ಮುಳುಗಲೇ ಇಲ್ಲ.
          -- ಡಾ| ಶಾಂತಲಕ್ಷ್ಮಿ

ಪರಿಮಳದ ಮನೆ

ಕಲ್ಲೊಂದು ಪೊದೆಗೆ ಬಿದ್ದಾಗ
ಹಕ್ಕಿ ರಿವ್ವನೆ ಹಾರಿತು
ಮೊಲ ಛಂಗನೆ ನೆಗೆಯಿತು
ಹಾವು ಹೆಡೆಯೆತ್ತಿ ಸರಿಯಿತು
ಕಲ್ಲು ಹೃದಯದಿಂದ
ಭಯದ ಅಲೆಗಳು.

ಹೂವೊಂದು ಗಿಡದಲ್ಲಿ ಅರಳಿದಾಗ
ದುಂಬಿ ಹಾರಿ ಬಂತು
ಚಿಟ್ಟೆ ತೇಲಿ ಬಂತು
ಹುಡುಗಿ ಓಡಿ ಬಂದಳು
ಹೂವಿನ ಒಡಲಿಂದ
ಖುಷಿಯ ತರಂಗಗಳು.

ಕಲ್ಲಿಗೆ ಕಮಟು ವಾಸನೆ
ಹೂವು ಪರಿಮಳದ ಮನೆ.

-- ರವಿಶಂಕರ oddambettu

ಚಂದ್ರನ ಕುರಿತಾದ ಹನಿಗವನಗಳು - ಭಾಗ ೧

ಚಂದ್ರ ಚುಟುಕು 

ಇಂದುಮುಖಿಯರೆಲ್ಲಾ
ಖುಷಿಪಟ್ಟ
ಆ ಕ್ಷಣ
ಚಂದ್ರ ಗ್ರಹಣ !

********
ತಾರೆಯರೇ ಹೀಗೆ
ಕಣ್ಣು ಹೊಡೆದ ಮಾತ್ರಕ್ಕೇ
ಚಂದ್ರ ಸಿಕ್ಕುವನೇ?
ಪಾಪ!
ಇರುವನು ಅವನೊಬ್ಬನೇ !!

************

ಎಂಥ
ಅಹಂಕಾರ
ಚಂದ್ರನಿಗೆ
ಹೀಗಾ
ಚೆಲ್ಲಾಡುವುದು
ನಗ ನತ್ತುಗಳ
ತುಂಬಿ ಹೋಗಿದೆಯಲ್ಲ
ಬಾನಂಗಳ  !!
 
         -- ಅರವಿಂದ ದೀಕ್ಷಿತ್
       
**********

ಮುಂದುವರೆಯುವುದು...

ಹನಿಗವನಗಳು

ಬಡವ
ಗೆಳತೀ,
ನಿನ್ನ ಚಕ್ಕೆ ಕಣ್ಣುಗಳ
ಕಂಡಾಗಲೆಲ್ಲ
ಅನಿಸಿದ್ದು,
ಆ ಆಕಾಶದರಸ
ಎಂಥಾ ಬಡವ !!!
   -- ಡಾ! ಗೋವಿಂದ ಹೆಗಡೆ

ಸೋಜಿಗ
ಹೊಲದ ಒಡತಿಯ ಸೆರಗು
ಸೋಕಿ
ಹುಲ್ಲು ಕಡ್ಡಿಯಲಿ
ತೆನೆ ಕಾಳು ಕಟ್ಟಿತು !
  -- ಶಿವಕುಮಾರ ಸಾಯ

ಹನಿಗವನಗಳು

Hello reader. Thanks for visiting my kannada blog. I recently got married and found a few interesting n funny poems in my diary. Just thought to post these on my blog for U... Happy reading :)


ಮದುವೆಯಾಯ್ತು,
ಹೆಂಡತಿ ಮನೆಗೆ ಬಂದಳು,
ಮನೆ ಸ್ವರ್ಗವಾಯ್ತು....... ನಾನೀಗ ಸ್ವರ್ಗವಾಸಿ!!!!

*********

ಹಲವಾರು ವರುಷಗಳ ಅನುಭವ ಇದ್ದರೂ,
ಅದನ್ನು ನಮ್ಮ ಬಯೋಡಾಟದಲ್ಲಿ ಸೇರಿಸಲಾಗದಂಥ
ಏಕೈಕ ಕೆಲಸವೆಂದರೆ - ಫ್ಲರ್ಟಿಂಗ್!!!

*********

ತನ್ನ ತಪ್ಪಿದ್ದಾಗ ಶರಣಾಗುವನು ಪ್ರಾಮಾಣಿಕ,
ತಾನ್ ಮಾಡಿರುವುದು ಸರಿಯೇ ತಪ್ಪೇ ಗೊತ್ತಿಲ್ಲದಾಗ
ಶರಣಾಗುವವನು ಬುದ್ಧಿವಂತ....

ತಾನು ಸರಿಯಿದ್ದಾಗಲೂ ಶರಣಾಗುವವನು ಗಂಡ...!!!!

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan